ಟಿ.ಡಬ್ಲ್ಯುಆರ್ ಸತ್ಯವೇದ ಪ್ರಶ್ನಾವಳಿ ಎಂದರೇನು?

ತಿಳಿಯಲು ಇಲ್ಲಿ ‘ಕ್ಲಿಕ್’ ಮಾಡಿರಿ.

ಟಿ.ಡಬ್ಲ್ಯು.ಆರ್ ಇಂಡಿಯಾ ಸತ್ಯವೇದ ಪ್ರಶ್ನಾವಳಿಯು ಭಾರತೀಯ ಭಾಷೆಗಳಲ್ಲಿ ಸತ್ಯವೇದದ ಆಳವಾದ ಅಧ್ಯಯನಕ್ಕಾಗಿ ಆಸಕ್ತಿಯನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದೆ. ಕಳೆದ 11 ವರುಷಗಳಿಂದ ಸತ್ಯವೇದ ಪ್ರಶ್ನಾವಳಿ ಕಾರ್ಯಕ್ರಮವನ್ನು ಬಹು ಸಫಲತೆಯಿಂದ ನಿರ್ವಹಿಸಿದ್ದೇವೆ. ಮುಖ್ಯವಾಗಿ ಟಿ.ಟಿ.ಬಿ ಯ ಡಾ| ವೆರ್ನಾನ್ ಮೆಕ್ಗೀ ರವರು ಸಿದ್ಧಪಡಿಸಿದ ಕ್ರಮಬದ್ಧವಾದ ಸತ್ಯವೇದ ಅಧ್ಯಯನವು ಈ ಸಫಲತೆಗೆ ಕಾರಣವಾಗಿದೆ. ಮತ್ತು ಅಧ್ಯಯನವು 100 ಕ್ಕು ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ಟಿ.ಡಬ್ಲ್ಯು.ಆರ್ ಇಂಡಿಯಾದಲ್ಲಿ ಲಭ್ಯವಿದೆ. ಸತ್ಯವೇದವನ್ನು ಇಷ್ಟೊಂದು ಆಳವಾಗಿ ಮತ್ತು ಶ್ರೀಮಂತವಾಗಿ ಅಭ್ಯಸಿಸುವುದರಲ್ಲಿ ಖಂಡಿತವಾಗಿಯೂ ಇದೊಂದು ಅದ್ವೀತಿಯ ಅನುಭವವಾಗಿದೆ ಎಂದು ಟಿ.ಡಬ್ಲ್ಯು.ಆರ್ ಸತ್ಯವೇದ ಪ್ರಶ್ನಾವಳಿಯಲ್ಲಿ ಭಾಗವಹಿಸಿದ ಎಲ್ಲ ಸಭೆಗಳು ಸಾಕ್ಷಿ ನುಡಿದಿವೆ. 2019 ನೇ ಇಸವಿಯಲ್ಲಿ ಭಾರತ ದೇಶದಲ್ಲಿ 66,000 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದರಲ್ಲಿ ಭಾಗವಹಿಸಿದ್ದರು.

ಈ ವರುಷದಲ್ಲಿ ನಾವು ಇನ್ನೊಂದು ಹೆಜ್ಜೆ ಮುಂದಿಟ್ಟು ಈ ಕಾರ್ಯಕ್ರಮವನ್ನು ವಿದೇಶದಲ್ಲಿರುವವರಿಗೂ ತಲುಪುವಂತೆ ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಇದಕ್ಕಾಗಿ ಆನ್‍ಲೈನ್ ಸತ್ಯವೇದ ಪ್ರಶ್ನಾವಳಿಯ ಆಲೋಚನೆ ಹುಟ್ಟಿದೆ. ಕೋವಿಡ್-19 ಎಂಬ ಸಾಂಕ್ರಾಮಿಕ ರೋಗವು ನಮ್ಮ ಈ ಆಲೋಚನೆಯನ್ನು ಮತ್ತಷ್ಟು ದೃಢಪಡಿಸಿದೆ. ಏಕಂದರೆ ನಾವು ಸರಕಾರದ ತಡೆಯಾಜ್ಞೆ ಮತ್ತು ನಿಯಮಗಳ ಮಿತಿಯೊಳಗೆ ಇದ್ದುಕೊಂಡೇ ನಮ್ಮ ಸೇವೆಯನ್ನು ಮುಂದುವರಿಸಲು ಪ್ರಯಾಸಪಡಬೇಕಾಗಿದೆ.

ಈ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ, ವಿಮೋಚನಕಾಂಡದ ಮೂಲಕ ನಿಮ್ಮ ಪ್ರಯಾಣವು ನಿಮ್ಮನ್ನು ಆತ್ಮೀಕವಾಗಿ ಬಲಗೊಳಿಸಿ ನಿಮಗೆ ಒಂದು ಅದ್ಭುತ ಅನುಭವವಾಗುವುದೆಂದು ನಮ್ಮ ನಿರೀಕ್ಷೆ ಆಗಿದೆ. ನಿಮ್ಮ ಭಾಗವಹಿಸುವಿಕೆಯು ನಮಗೆ ಇನ್ನೂ ಹೆಚ್ಚಾಗಿ ಸುವಾರ್ತೆಯನ್ನು ಸಾರಲು ಹಾಗೂ ದೇಶದ ಉದ್ದಗಲಕ್ಕೂ ಇರುವ ವಿಶ್ವಾಸಿಗಳನ್ನು ಬಲಪಡಿಸಲು ಸಹಾಯಕವಾಗುತ್ತದೆ. ಹಾಗೆಯೇ ಟಿ.ಡಬ್ಲ್ಯುಆರ್ ಇಂಡಿಯಾಕ್ಕೆ ನಿಮ್ಮ ಸತತ ಬೆಂಬಲವೂ ಕೂಡ ಆಗಿರುತ್ತದೆ.

ಧನ್ಯವಾದಗಳು.

ಲಭ್ಯವಿರುವ ಭಾಷೆಗಳು :-

ವಿವಿಧ ಭಾಷೆಗಳ ಗುಂಪುಗಳ ಹೆಚ್ಚಿನ ಭಾಗಗಳನ್ನು ತಲುಪುವಂತೆ ಟಿ.ಡಬ್ಲ್ಯು.ಆರ್ ಇಂಡಿಯಾ ಸತ್ಯವೇದ ಪ್ರಶ್ನಾವಳಿಯು 14 ಭಾಷೆಗಳಲ್ಲಿ ಆನ್‍ಲೈನ್ ಮೂಲಕ ದೊರೆಯುವಂತೆ ಮಾಡಲಾಗಿದೆ. ಈ ವರುಷದಲ್ಲಿ ಲಭ್ಯವಿರುವ ಭಾಷೆಗಳನ್ನು ತಿಳಿದುಕೊಳ್ಳಲು ಇಲ್ಲಿ ‘ಕ್ಲಿಕ್’ ಮಾಡಿರಿ.

English

हिन्दी

தமிழ்

తెలుగు

മലയാളം

বাংলা

मराठी

ਪੰਜਾਬੀ

ગુજરાતી

ಕನ್ನಡ

অসমীয়া

नेपाली

ଓଡ଼ିଆ

Kokborok


ಇವುಗಳಲ್ಲಿ ಯಾವುದೇ ಒಂದು ಭಾಷೆಯನ್ನು ಓದಿ ಅರ್ಥಮಾಡಿಕೊಳ್ಳಲು ನೀವು ಸಮರ್ಥರಿದ್ದರೆ ಈ ಸತ್ಯವೇದ ಪ್ರಶ್ನಾವಳಿಯಲ್ಲಿ ಸುಲಭವಾಗಿ ಭಾಗವಹಿಸಬಲ್ಲಿರಿ. ನಿಮಗೆ ಹಿತಕರವಾಗಿರುವ ಭಾಷೆಯನ್ನು ಆಯ್ದುಕೊಂಡು ನೋಂದಣಿ ಮಾಡಿರಿ.

ನೋಂದಣಿ ಶುಲ್ಕ :-

ನೋಂದಣಿ ಶುಲ್ಕ – ಒಂದು ಬಾರಿ ರೂ.50 ಮಾತ್ರ

ಸತ್ಯವೇದ ಪ್ರಶ್ನಾವಳಿಯಲ್ಲಿ ನೋಂದಣಿ ಮಾಡುವಾಗ ಪರೀಕ್ಷಾ ಶುಲ್ಕವನ್ನು ಆನ್‍ಲೈನ್ ಮೂಲಕವೇ ಪಾವತಿಸಬೇಕು.

ನೀವು ವಿದೇಶದಲ್ಲಿದ್ದುಕೊಂಡು ಹಣ ಪಾವತಿಸಲು ಇಚ್ಛಿಸಿದರೆ ಭಾರತೀಯ ಕರೆನ್ಸಿಯಲ್ಲಿ ಹಣ ಪಾವತಿ ಮಾಡಬೇಕು. ಇದರಲ್ಲಿ ನಿಮಗೆ ಏನಾದರೂ ತೊಂದರೆಯಾದರೆ ನಮ್ಮ ವೈಬ್‍ಸೈಟ್‍ನಲ್ಲಿರುವ ಸಂಪರ್ಕ ಪಟ್ಟಿಯಲ್ಲಿನ ಯಾವುದೇ ಸಂಪರ್ಕ ಸೂಚನೆ ಉಪಯೋಗಿಸಲು ಅನುಮಾನಿಸದಿರಿ.

ಒಂದು ಬಾರಿ ನಿಮ್ಮ ನೋಂದಣಿ ಪೂರ್ಣಗೊಂಡು ಟಿ.ಡಬ್ಲ್ಯು.ಆರ್ ಇಂಡಿಯಾದಿಂದ ಪರಿಶೀಲಿಸಲ್ಪಟ್ಟ ಮೇಲೆ ಅದರ ದೃಢೀಕರಣದೊಂದಿಗೆ ನೀವು ಆನ್‍ಲೈನ್ ಸತ್ಯವೇದ ಪ್ರಶ್ನಾವಳಿಯಲ್ಲಿ ಭಾಗವಹಿಸುವ ಸಿದ್ಧತೆ ನಡೆಸುವಾಗ ಬೇಕಾದ ಮಾರ್ಗದರ್ಶನ ಮತ್ತು ಅಧ್ಯಯನಕ್ಕಾಗಿ ಆಡಿಯೋ ಲಿಂಕ್‍ಗಳನ್ನು ನಿಮಗೆ ಕಳುಹಿಸಲಾಗುವುದು